Tuesday, January 11, 2011

Kemmannu gundi . . . New year



ಜನವರಿ 1, ಹೊಸ ವರ್ಷಕ್ಕೆ ಏನು ಮಾಡಬೇಕೆಂದು ಚರ್ಚೆ ಶುರುವಾಯಿತು . .ಕೊನೆಗೆ ನಾನು ಮತ್ತು ನನ್ನ ಸಹೋದರರು(ಕಾರ್ತಿಕ್ ,ಕಿರಣ್,ಪ್ರಶಾಂತ್,ಶ್ರೀರಾಘವ,ಕಿಶೋರ್ )ಕೆಮ್ಮಣ್ಣುಗುಂಡಿಗೆ ಹೋಗುವುದೆಂದು ನಿಶ್ಚಯವಾಯಿತು .ಈ ಮೊದಲು ನಾನು ಗೆಳೆಯರ ಜೊತೆ ಹೋಗಿ ಬಂದಿದ್ದೆ . .ಹೀಗಾಗಿ ಸ್ಥಳದ ಪರಿಚಯ ವಿತ್ತು . .ನಾವು ಎಲ್ಲ ಸಹೋದರರೂ ಸೇರಿ ಟ್ರೈನ್ ನಲ್ಲಿ ಹೊರಡಲು ಯೋಚನೆ ಮಾಡಿದೆವು . .ಕೊನೆಗೂ ನಾವು ಟ್ರೈನ್ ನಲ್ಲಿ ಬೀರೂರ್ ಗೆ ಸಂಚಾರ ಬೆಳೆಸಿದೆವು. (31.12.2010)

ದಿನ ೧ .
ನಾವು ಕೆಮ್ಮಣ್ಣುಗುಂಡಿಯಲ್ಲಿ ಮೊದಲೇ ಒಬ್ಬ ಏಜೆಂಟ್ ನನ್ನು ಬುಕ್ ಮಾಡಿದ್ದೆವು(ಯೋಗೇಶ್ ). . .ಮಾತಿಗೆ ಸರಿಯಾಗಿ ಅವರು ಬೀರೂರಿಗೆ ಬಂದು ನಮ್ಮನ್ನು ಪಿಕ್ ಅಪ್ ಮಾಡಿದರು .. ನಾವು ಬೀರೂರು ತಲುಪಿದಾಗ ನಸುಕಿನ ಜಾವ ಸುಮಾರು 3:40.ಬೀರೂರಿನಿಂದ ಸೀದಾ ಕಲ್ಲತ್ತಿಗಿರಿ ಗೆ ಪ್ರಯಾಣ ಬೆಳೆಸಿದೆವು..ನಮ್ಮ ರೂಮುಗಳು ಅಲ್ಲೇ ಬುಕ್ ಆಗಿದ್ದವು .ಬೀರೂರಿನಿಂದ ಕಲ್ಲತ್ತಿಗಿರಿಗೆ ಸುಮಾರು 45 ನಿಮಿಷದ ಪ್ರಯಾಣ .ಕಲ್ಲತ್ತಿಗಿರಿ ತಲುಪಿದಾಗ ಬೆಳಗಿನ ಜಾವ 4:45.ಕಲ್ಲತ್ತಿಗಿರಿಯು ಕೆಮ್ಮಣ್ಣುಗುಂಡಿಯಿಂದ ಸುಮಾರು 10ಕಿ.ಮಿ. ಕೆಳಗಡೆ ಇದೆ .ಕಲ್ಲತ್ತಿಗಿರಿಯಲ್ಲಿ ಬೆಳಿಗ್ಗೆ ಕಾಫಿ ಟೀ ಕುಡಿದು,ನಮ್ಮ ಸಕಲ ಬೆಳಗಿನ ಕಾರ್ಯ ಗಳನ್ನೂ ಮುಗಿಸಿಕೊಂಡು,ಅಲ್ಲೇ ಉದ್ಯಾನವನದಲ್ಲಿ ಒಂದೆರಡು ಫೋಟೋ ಕ್ಲಿಕ್ಕಿಸಿದೆವು .ನಂತರ ಸ್ನಾನ ಮಾಡಲು ಸಿದ್ಧರಾದೆವು.ಅಲ್ಲೇ ಸಮೀಪವಿದ್ದ "ಜಾರೋಗುಪ್ಪೆ"ಫಾಲ್ಸ್ ನಲ್ಲಿ ಸ್ನಾನ ಮಾಡುವುದೆಂದು ನಿಶ್ಚಯಿಸಿದೆವು .



ಜಾರೋಗುಪ್ಪೆ ಫಾಲ್ಸ್ ನ ಮಜವೇ ಒಂದು ರೀತಿಯ ರೋಮಾಂಚನ . .ಫಾಲ್ಸ್ ನ ಮೇಲುಗಡೆ ಇಂದ ಸುಯ್ಯನೆ ಕೆಳಕ್ಕೆ ಜಾರುವುದು ಒಂದು ಅಪರೂಪದ ಅನುಭವ . ಕೊನೆಗೆ ಸ್ನಾನ ಮುಗಿಸಿ ತಿಂಡಿ ತಿಂದು ಕಲ್ಲತ್ತಿ ಫಾಲ್ಸ್ ಟ್ರೆಕ್ಕಿಂಗ್ ಗೆ 9.45ಕ್ಕೆ ಸಿಧ್ಧರಾದೆವು.ಕಲ್ಲತ್ತಿಗಿರಿಯಿಂದ ಸುಮಾರು 4 ಕಿ .ಮಿ. ಮೇಲಕ್ಕೆ ಹತ್ತಿದರೆ ಸುಂದರ ಮನಮೋಹಕ ಕಲ್ಲತ್ತಿ ಫಾಲ್ಸ್ ಕಾಣಸಿಗುತ್ತದೆ .ಟ್ರೆಕ್ಕಿಂಗ್ ದಾರಿಯು ಮೊದಲರ್ಧದಲ್ಲಿ ಸುಲಭವಾಗಿ ಕಂಡರೂ ,ನಂತರ ಮೇಲಕ್ಕೆ ಹೋದಂತೆಲ್ಲ ಕಷ್ಟಕರವೆನಿಸುತ್ತದೆ .ಸುಮಾರು 11 ಘಂಟೆಗೆ ಫಾಲ್ಸ್ ತಳಹದಿ ಯನ್ನು ತಲುಪಿದೆವು.ನಮಗೆ ಇದ್ದ ಆಯಾಸವೆಲ್ಲಾ ಆ ಜಲಪಾತ ನೋಡುತ್ತಿದ್ದಂತೆಯೇ ಮಾಯವಾಯಿತು . ಎಲ್ಲರೂ ಸ್ವಲ್ಪ ಸಮಯ ನೀರಿನಲ್ಲಿ ಆಟವಾಡಿ ಮೋಜು ಮಾಡಿದೆವು .ಹಾಗೆಯೇ ಫೋಟೋ session ಕೂಡ ನಡೆಯಿತು






. . ಸುಮಾರು 12:30ಗೆ ಕೆಳಗೆ ಇಳಿಯಲು ಪ್ರಾರಂಭಿಸಿದೆವು . .ನಾವು ಕಲ್ಲತ್ತಿಗಿರಿಯನ್ನ ತಲುಪಿದಾಗ ಮಧ್ಯಾಹ್ನ 1.30 ಆಯಿತು .ಎಲ್ಲರೂ ಸ್ವಲ್ಪ ಸಮಯ ವಿಶ್ರಾಂತಿಯನ್ನು ತೆಗೆದುಕೊಂಡು ಊಟ ಮಾಡಿ ಮುಂದಿನ ಪಯಣಕ್ಕೆ ಸಿಧ್ಧರಾದೆವು .
ನಮ್ಮ ಮುಂದಿನ ಸ್ಥಳ ಕೆಮ್ಮಣ್ಣುಗುಂಡಿ ಮತ್ತು z point. ಕಲ್ಲತ್ತಿಗಿರಿಯಿಂದ ಸುಮಾರು 10 ಕಿ.ಮಿ. ಕ್ರಮಿಸಿದರೆ ಅಲ್ಲೇ ಕೆಮ್ಮಣ್ಣುಗುಂಡಿ ಕಾಣಸಿಗುತ್ತದೆ.ಕೆಮ್ಮಣ್ಣುಗುಂಡಿಯ ವೀಕ್ಷಣಾ ಗೋಪುರ ಮತ್ತು ಉದ್ಯಾನವನವನ್ನು ನೋಡಿ,z point ಗೆ ಪ್ರಯಾಣ ಬೆಳೆಸಿದೆವು .
ಕೆಮ್ಮಣ್ಣುಗುಂಡಿ ಇಂದ 2 ಕಿ. ಮಿ.ಸಾಗಿದರೆ,ಅಲ್ಲಿ ಗಾಡಿಯನ್ನು ನಿಲ್ಲಿಸಿ ಮತ್ತೆ ಸುಮಾರು 1.5 ಕಿ. ಮಿ. ಟ್ರೆಕ್ಕಿಂಗ್ ಮಾಡಬೇಕು . ಕೊನೆಗೆ z point ನೋಡಿಕೊಂಡು ಸಂಜೆ 6.30 ಗೆ ನಮ್ಮ ರೂಂ ಬುಕ್ ಮಾಡಿದ್ದ ಕಲ್ಲತ್ತಿಗಿರಿಗೆ ಬಂದೆವು .ರಾತ್ರಿ ಊಟ ಮಾಡಿ ಚೆನ್ನಾಗಿಮಲಗಿದೆವು .

ದಿನ 2.
ಮುಂಜಾನೆ ೭ಕ್ಕೆ ಎದ್ದು ಸ್ನಾನ ಮಾಡಿ ,ತಿಂಡಿ ತಿಂದು,9:30ಕ್ಕೆ ಹೆಬ್ಬೆ ಜಲಪಾತ ನೋಡಲು ಹೊರಟೆವು.ಹೆಬ್ಬೆ ಫಾಲ್ಸ್ ಕೆಮ್ಮಣ್ಣುಗುಂಡಿ ಇಂದ ಸುಮಾರು 10ಕಿ.ಮಿ. ದೂರದಲ್ಲಿದೆ .ಅಲ್ಲಿಗೆ ಜೀಪ್ ನಲ್ಲಿಯೇ ತೆರಳಬೇಕು.ನಮಗೆ ಆಗಲೇ ಜೀಪನ್ನು ಯೋಗೇಶ್ ರವರು ಬುಕ್ ಮಾಡಿದ್ದರು.ಜೀಪ್ ಗಳು ನಿಲ್ಲುವ ಸ್ಥಳ ದಿಂದ ಮತ್ತೆ 20 ನಿಮಿಷ ನಡೆದು ಹೋದರೆ ಹೆಬ್ಬೆ ಫಾಲ್ಸ್ ಕಾಣುತ್ತದೆ .



ಹೆಬ್ಬೆ ಫಾಲ್ಸ್ ನಲ್ಲಿ ಮೋಜು ಮಸ್ತಿ ಮಾಡಿ ಫೋಟೋ ಗಳನ್ನು ತೆಗೆಸಿಕೊಂಡು ಮತ್ತೆ ಕೆಮ್ಮಣ್ಣುಗುಂಡಿಗೆ 12:30 ಕ್ಕೆ ವಾಪಸ್ಸಾದೆವು . ನಂತರ ಮುಳ್ಳಯ್ಯನಗಿರಿ ಗೆ ಹೊರಡಲು ಸಜ್ಜಾದೆವು . ಅಲ್ಲೇ ದಾರಿಯಲ್ಲೇ ಒಂದು ಫಾಲ್ಸ್ ಬಳಿ ನಮಗೆ ಕೊಟ್ಟು ಕಳಿಸಿದ್ದ ಊಟವನ್ನೂ ಮುಗಿಸಿದೆವು .
ಮುಳ್ಳಯ್ಯನಗಿರಿ ದಾರಿಯಲ್ಲೇ ಎಡ ತಿರುವು ಪಡೆದು ಮುಂದೆ ಸಾಗಿದರೆ ಬಾಬಾಬುಡನಗಿರಿ ಸಿಗುತ್ತದೆ.ಅದನ್ನೂ ನೋಡಿಕೊಂಡು ಅಲ್ಲೇ ಸಮೀಪದಲ್ಲೇ ಮಾಣಿಕ್ಯಧಾರ ಜಲಪಾತವನ್ನೂ ನೋಡಿದೆವು.

ಮುಂದೆ ಗಾಳಿಕೆರೆ ಎನ್ನುವ ಕೆರೆಯನ್ನು ನೋಡಿಕೊಂಡು ತಿರುಗಿ ಮುಳ್ಳಯ್ಯನಗಿರಿಗೆ ಪ್ರಯಾಣ ಬೆಳೆಸಿದೆವು .
ನಾವು ಮುಳ್ಳಯ್ಯನಗಿರಿ ತಲುಪಿದಾಗ ಸಂಜೆ 6 ಘಂಟೆ ಆಗಿತ್ತು .ಅಲ್ಲೇ ಸೂರ್ಯಾಸ್ಥವನ್ನು ನೋಡಿದೆವು .
ಮುಳ್ಳಯ್ಯನ ಗಿರಿ ಕರ್ನಾಟಕದಲ್ಲೇ ಅತಿ ಎತ್ತರದ ಶಿಖರ . ಹಿಮಾಲಯ ದಿಂದ ಕೊಡೈಕೆನಾಲ್ ಮಧ್ಯ ದಲ್ಲಿರುವ ಏಕೈಕ ದೊಡ್ಡ ಶಿಖರ.ಮುಲ್ಲಯನ ಗಿರಿ ಯನ್ನು ಹತ್ತಿ ಅಲ್ಲೊಂದಿಷ್ಟು ಫೋಟೋ ಗಳನ್ನು ತೆಗೆದು, ಗಾಡಿ ಇರುವ ಜಾಗಕ್ಕೆ 6.30 ಕ್ಕೆ ವಾಪಸ್ಸಾದೆವು .




ನಂತರ ಸರಿಯಾಗಿ 9 ಗಂಟೆಗೆ ಬೀರೂರಿಗೆ ಬಂದೆವು .




ಬೆಂಗಳೂರು ಟ್ರೇನು ರಾತ್ರಿ 11.45ಕ್ಕೆ ಇತ್ತು .ಅಲ್ಲಿಯವರೆಗೂ ಅಲ್ಲೇ ಊಟ ಮಾಡಿ ಟ್ರೈನ್ ಗಾಗಿ ಕಾಯುತ್ತ ಕುಳಿತೆವು.ಎಲ್ಲ ಪ್ರಯಾಣವನ್ನು ಮುಗಿಸಿ ಬೆಂಗಳೂರು ಸೇರಿದಾಗ ಬೆಳಿಗ್ಗೆ 6.30.


ಊಟ ವಸತಿಯ ಬಗ್ಗೆ ವಿವರಗಳು :
ಒಂದು ತಲೆಗೆ ತಲಾ ಸುಮಾರು 1500 ರೂಪಾಯಿಗಳು .(ಎರಡು ಹೊತ್ತು ಊಟ ,ಎರಡು ಹೊತ್ತು ತಿಂಡಿ ,ಕಾಫಿ ಟೀ ,ಒಂದು ದಿನ ಮಲಗಲು ಗೆಸ್ಟ್ ಹೌಸ್ ,ಹೆಬ್ಬೆ ಫಾಲ್ಸ್ ಗೆ ಜೀಪಿನ ವ್ಯವಸ್ಥೆ ,ರೈಲ್ವೆ ಸ್ಟೇಷನ್ ಇಂದ ಪಿಕ್ ಅಪ್ ಮತ್ತು ಡ್ರಾಪ್ ,ಗೈಡ್ ಚಾರ್ಜೆಸ್ ,ಇತ್ಯಾದಿ.. ಗಳನ್ನು ಒಳಗೊಂಡಿರುತ್ತದೆ .)
ಸಂಪರ್ಕಿಸಬೇಕಾದ ನಂಬರ್ :
ಯೋಗೇಶ್ (ಕೆಮ್ಮಣ್ಣುಗುಂಡಿ );9480672803, 9880806737.